Sunday, November 15, 2009

ಕಲಿಯುಗದ ಅಂತ್ಯದ ನಂತರದ ಜೀವನ

ಏನಪ್ಪಾ ಇದು ಯಾಕೆ ಈಗ ಕಲಿಯುಗದ ಅಂತ್ಯದ ಬಗ್ಗೆ ಚಿಂತೆ ಅಂಥ ಯೋಚನೆ ಮಾಡ್ತಾ ಇದ್ದೀರಾ? ಈ ಲೇಖನದಲ್ಲಿ ನಾನು ಬರೆಯುತ್ತಿರುವುದು ಪ್ರಳಯದ ನಂತರದ ನಮ್ಮ ಜೀವನದ ಬಗ್ಗೆ.ಹೀಗೆ ಗೂಗಲ್ ನಲ್ಲಿ ಅಲೆದಾಡುತ್ತ ಇದ್ದಾಗ ಒಂದು ವಿಷಯ ಸಿಕ್ಕಿತು. ಏನಂತಾರೆ ಅದು ಜೀವ ರಾಶಿಯ ವಿಸ್ಮಯದ ಹೊಸ ಮಗ್ಗಲಿನ ಬಗ್ಗೆ ಹೇಳುತ್ತಾ ಇತ್ತು. ಅದೆನೆನ್ಧರೆ ಪ್ರಪಂಚದ ವಿವಿಧ ಸ್ಥರದ (ಲಯೇರ್ಸ್) ಬೆಗ್ಗೆ. ಅಂದರೆ ಒಂದು ಸ್ಥರದ ಜೀವಿಗಳು ಇನ್ನೊಂದು ಸ್ಥರದ ಜೀವಿಗಳನ್ನ ನಿಯತ್ರಣ ಮಾಡತ್ತೆ ಅಂಥ. ಎಷ್ಟು ನಿಜ ಎಷ್ಟು ಸುಳ್ಳು ಯಾರಿಗೆ ಗೊತ್ತು. ದಿನ ನಿತ್ಯ ಒಂದು ಇಂಚಿ ಜಾಗಕ್ಕೆ ಕಿತ್ತಾಡುವ ಕಾಲದಲ್ಲಿ ಪ್ರಳಯ ಆಗಿ ಎಲ್ಲರು ಒಂದು ದಿನ ನೀರು/ಜ್ವಾಲಾಮುಖಿ/... ಯವುದದರೊಂದರ ಪಾಲಾದರೆ, ಅತೃಪ್ತ ಆತ್ಮಗಳು ಏನ್ ಮಾಡುತ್ತವೆ ಅನ್ನುವುದರ ಬಗ್ಗೆ ಒಂದು ಕಿರು ನೋಟ.
ಎಲ್ಲರಿಗೂ ಗೊತ್ತಿರುವಂತೆ ನಮ್ಮ ಸಂಸ್ಕೃತಿಯಲ್ಲಿ ಸಿದ್ಧಾಂಥಕ್ಕೆನೂ ಕೊರತೆ ಇಲ್ಲ. ಆದರೆ ಕೊರತೆ ಇರುವುಧು ಅದನ್ನ ಸಮರ್ಥಿಸಿಕೊಲ್ಲುವುದರಲ್ಲಿ. ಆತ್ಮ ಬೇರೆ ದೇಹ ಬೇರೆ ಅಂಥ ಒಂದು ಸಿದ್ದಾಂತ ಹೇಳಿದರೆ, ಎರಡೂ ಒಂದೇ ಅಂಥ ಇನ್ನೊಂದು ಸಿದ್ದಾಂತ ಹೇಳತ್ತೆ. ಆದರೆ ಸಾಮಾನ್ಯವಾಗಿ ಹೇಳುವುದೇನೆಂದರೆ ಅತೃಪ್ತ ಮನುಷ್ಯ ಸತ್ತರೆ ಆತನ ಆತ್ಮ ತ್ರಿಶಕು ಸ್ಥಿತಿ ತಲುಪತ್ತೆ ಅಂಥ.ಇದೆ ಈ ಲೇಖನದ ಮುಖ್ಯ ವಿಚಾರ.
ನಿಮಗೆ ತಿಳಿದಿರುವಂತೆ ಇದರ ಬಗ್ಗೆ ಅನೇಕ ಗ್ರಂಥಗಳು ನಮಗೆ ಸಿಗುತ್ತವೆ . ಉದಾಹರಣೆಗೆ ನೋಸ್ತೆರ್ ದ್ಯಾಮಸ್ ಬರೆದಿರುವ ಕೃತಿ. ಅದೇ ರೀತಿ ಮಾಯನ್ ಕ್ಯಾಲೆಂಡರ್ ೨೦೧೨ ಕ್ಕೆ ಕೊನೆಯಗತ್ತೆ. ಆನಂತರ ಪ್ರಪಂಥ ಕೊನೆಗೊಳ್ಳತ್ತೆ ಅಂಥ ಬಲವಾದ ನಂಬಿಕೆ ಕೂಡ ಇದೆ. ಅದಾದ ಮೇಲೆ ಒಂದು ವೇಳೆ ಎಲ್ಲರೂ ಸತ್ತೇವು ಅಂದುಕೊಳ್ಳಿ.ಆನಂತರ ಪ್ರಪಂಚದ ಜೀವಿಗಳ ಆತ್ಮಗಳೆಲ್ಲ ಸೇರಿ ಮತ್ತೊಂದು ಪ್ರಪಂಚ ಸೃಷ್ಟಿ ಆಗತ್ತೆ ಅನ್ಧುಕೊಳ್ಳೋಣ. ಈಗ ೮ನೆ ತರಗತಿಯ ಒಂದು ಪಾಠ ನೆನಪಿಗೆ ಬಂತು . ಪಾಠದ ಹೆಸರು ಶವದ ಮನೆ ಅಂಥ. ಅದರಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪದೆಧು ದೆವ್ವಗಳಗಿ ಶವದ ಮನೆಯಲ್ಲಿ ದಿನರಾತ್ರಿ ವಿಚಾರ ವಿನಿಮಯ ಮಾಡಿಕೊಳ್ಳೋ ದೆವ್ವಗಳ ಬಗ್ಗೆ ಒಂದು ತಮಾಷೆಯ ಹಾಗೆ ಹೃದಯ ಮಿಡಿಯುವ ಪ್ರಸ್ತುತಿ ಇತ್ತು. ಸರಿ ಸರಿ ಮುಖ್ಯ ವಿಚಾರಕ್ಕೆ ಬರ್ತೀನಿ. ಇಸ್ಟೊಂದು ಆತ್ಮಗಳಿಗೆ ಸ್ವರ್ಗ/ನರಕ ದಲ್ಲಿ ಜಾಗ ಇರತ್ತಾ? ಇದ್ದರೂ ಒಟ್ಟಿಗೆ ಹೋದರೆ ಯಮ/ಚಿತ್ರಗುಪ್ತರಿಗೆ ಎಸ್ಟೊಂದು ಕೆಲಸ ಇರಲ್ವಾ? ಆಗ ಅವರು ಹೋದಕೆಳಸಗಾರರನ್ನು ನೇಮಿಸಲು ಏನ್ ಮಾಡ್ತಾರೆ? ಹೊಸ ಯಮದೂಥರು ಯಾರು ಆಗಬಹುದು? ಯಾವ ದೇಶದ ಜನಕ್ಕೆ ಪ್ರಾಮುಖ್ಯತೆ ಸಿಗಬಹುಧು? ಅಲ್ಲಿ ಯಾರು ರಾಜಕೀಯ ಮುಖಂದರಾಗ ಬಹುದು?.... ಅಯ್ಯೋ ಇಸ್ಟೊಂದು ವಿಚಾರ ಯೋಚನೆ ಮಾಡಬೇಕಲ್ಲ ! ನಿಧಾನವಾಗಿ ಯೋಚಿಸೋಣ.ಇದಕ್ಕೆ ಈಗಲೇ ಉತ್ತರ ಕಂಡುಹಿಡಿಧು ಪೇಟೆಂಟ್ ಗೆ ಮನವಿಸಲ್ಲಿಸೋದು ಉತ್ತಮ ಅನ್ನಿಸಿತು. ಅದಕ್ಕೆ ಈ ಲೇಖನದ ಎಲ್ಲ ಯೋಚನೆಗೆ ನಾನೇ ಮುಖ್ಯಸ್ಥ ಹ ಹ ಹ ...

ಉದಾಹರಣೆ ಭಾರತ ಸಂಸ್ಕೃತಿಯ ತವರು ಮತ್ತು ಜನಸಂಖ್ಯೆ ಯಲ್ಲೂ ಬಹಳ ಮುಂದುವರೆತ್ತಿರುವ ದೇಶ. ಹಾಗಾಗಿ ಕುಟುಂಬ ಕಲ್ಯಾಣ ಮತ್ತು ಸಂಸ್ಕೃತಿ ಖಾತೆ ನಮಗೆ. ಇನ್ನು ಗೃಹ ಖಾತೆ ಅಮರಿಕ ಪಾಲಾಗಬಹುದು.ಆತ್ಮಹತ್ಯಾ ದಳಕ್ಕೆ ಪಾಕಿಸ್ತಾನೀಯರು, ಕಾನೂನಿಗೆ ಇಂಗ್ಲೆಂಡ್ (ಏಕಾಂತದೆ ಅದು ನಮ್ಮ ಮಾತೃ ಸಂಸತ್ತು) , ... ಹೀಗೆ ಹಂಚಿಕೆ ವಿಚಾರಕ್ಕೆ ನಂತರ ಬರೋಣ.
ಅತ್ಯಂತ ಮುಖ್ಯ ವಿಚಾರ ಅಂದರೆ ಸ್ವರ್ಗಕ್ಕೆ ವೀಸಾ ಪಡೆಯುವುದು. ಇದು ಪ್ರಪಂಚವೇ ವೀಸಾ ಪಡೆಯುವುದಕ್ಕೆ ದುಂಬಾಲು ಬಿದ್ದಾಗ ಹೇಗೆ ಸ್ಪರ್ಧಿಸುವಿದು ಅನ್ನುವುಧರೆ ಬಗ್ಗೆ ಈಗ ಚಿಂತೆ ಮಾದುವುಧು ಅತ್ಯಗತ್ಯ . ವೀಸಾ ನಿಮಯ ಈಗಾಗಲೇ ನಮಗೆ ತಿಳಿದಿದೆ .ಯಾವುದು ನಥ ಯೋಚನೆ ಮಾಡ್ತಾ ಇದ್ದೀರಾ? ಗರುಡ ಪುರಾಣ . ಯಾರು ಕಳ್ಳತನ ಮಾಡಿರುತ್ತಾರೋ, ಸುಳ್ಳು ಹೇಳಿರುತ್ತಾರೋ, ಅವರು ನಿಶ್ಚಯ ವಾಗಿ ನರಕಕ್ಕೆ ಹೋಗುತ್ತಾರೆ.ಇದು ಗರುಡ ಪುರಾಣದಲ್ಲಿ ಸ್ವರ್ಗಕ್ಕೆ ಹೋಗಲು ಬೇಕಾದ ಅತಿ ಮುಖ್ಯ ಅಂಶ. ಅಂದರೆ ಯರ್ರೋ ಸ್ವರ್ಗಕ್ಕೆ ಹೋಗೋಕ್ಕೆ ಆಗಲ್ಲ ಅಂಥ ಅಂದುಕೊಳ್ಳುತ್ತ ಇದ್ದೀರಾ? ಇದನ್ನೇ ನಾನು ಮೊದಲು ಹೇಳಿದ್ದು.ಹೇಗೆ ಯಮನಿಗೆ ಈ ವಿಷಯ ಅರ್ಥ ಮಾಡಿಸಿ , ಆ ನಿಯಮವನ್ನ ಸದಿಲಿಸೋಧು ಅನ್ನುವುದರ ಬಗ್ಗೆ ಚರ್ಚೆ ಈಗಲೇ ನಡೆಧರೆ, ನಂತರದ ಬಧುಕು ಅಂದು ಕೊಂಡಸ್ಟು ಕಸ್ತವಿರದು.

ಪ್ರಳಯಕ್ಕೆ ಜಾತಿ, ಧರ್ಮ ಯಾವುದರ ಎಲ್ಲೆಯೂ ಇಲ್ಲ. ಒಂದು ಪಕ್ಷ ಪ್ರಳಯದ ಊಹೆಗಳು ನಿಜವಾಧರೆ, ಈ ಲೇಖನ ಓಧಿದವರು ದಯವಿಟ್ಟು, ಪ್ರಳಯದ ನಂತರದ ದಿನ " ಬ್ರಾಹ್ಮಣರ ಕಾಫಿ ಬಾರ್" ಬಳಿ ಇರುವಂತೆ ಕೋರಿಕೆ. ಕಾಫಿ,ತಿಂಡಿಯನ್ನು ದೆವ್ವಗಳೂ ಮಾಡುವುದು ನಿಜವಾದರೆ ಕಾಫಿ, ಖಾರಬಾತ್ ,ಇಡ್ಲಿ,ಒಡೆ ಸವಿಯುತ್ತ ಮುಂಧಿನ ಹೆಜ್ಜೆ ಬಗ್ಗೆ ಆರೋಗ್ಯಕಯ ಚರ್ಚೆ ನಡೆಸೋಣ.ಇಲ್ಲ ಎನ್ಧರೆ ನೀನು ಸಿಗುವಿದು ಗ್ಯಾರಂಟಿ. ಅದನ್ನೇ ಕುಡಿದು ಚರ್ಚೆ ಮಾಡೋಣ.
ಈ ಲೇಖನದಿಂದ ನಿಮಗೆ ಹೊಸ ಆಲೋಚನೆಗೆಳು ಬಂದಿದ್ದರೆ ಬಹಳ ಸಂತೋಷ. ಒಂದುವೇಳೆ ನಗು ಬಂದಿದ್ದರೆ ಲೇಖನ ಬರೆದದ್ದು ಸಾರ್ಥಕವೆಂದು ತಿಳಿಯುತ್ತೇನೆ.